ಲೋಕವು ಯಾವಾಗ ಅಂತ್ಯವಾಗುವುದು?

ಲೋಕವು ಯಾವಾಗ ಅಂತ್ಯವಾಗುವುದು?

ಸಾಂಕ್ರಾಮಿಕ ರೋಗ, ಭೂಕಂಪ, ಚಂಡಮಾರುತ, ತುಫಾನು, ಪ್ರವಾಹ ಮುಂತಾದ ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಜಗತ್ತು ಯಾವಾಗ ಅಂತ್ಯವಾಗುತ್ತದೆ ಎಂದು ಜನರು ಆಶ್ಚರ್ಯಪಡುತ್ತಾರೆ. ಇದು ಕಡೆಗಾಣಿಸಲಾಗದಂಥ ಗಂಭೀರವಾದ ಪ್ರಶ್ನೆ. ಕೆಲವರು ಸಾಯಲು ಭಯಪಡುವುದರಿಂದ ಈ ಪ್ರಶ್ನೆಯನ್ನು ಕೇಳುತ್ತಾರೆ. ಇತರರು ನ್ಯಾಯ ತೀರ್ಪಿನದಿನಕ್ಕಾಗಿ ಭಯಪಡುತ್ತಾರೆ, ಇನ್ನೂ ಕೆಲವರು ನಾವು ಇರುವ ಈ ಕೊಳಕು ಅವಸ್ಥೆಯನ್ನು ದೇವರು ಶೀಘ್ರವಾಗಿ ಕೊನೆಗೊಳಿಸುತ್ತಾನೆಂದೂ ಆತನ ಪ್ರೀತಿ ಮತ್ತು ನೀತಿಯ ರಾಜ್ಯವನ್ನು ತರುತ್ತಾನೆಂದೂ ನಿರೀಕ್ಷಿಸುತ್ತಾರೆ. ಹೀಗೆ ಮನುಷ್ಯನು ಶಾಂತಿಯಲ್ಲಿಯೂ ಸಂತೋಷದಲ್ಲಿಯೂ ಜೀವಿಸಬಹುದು.

ದೇವರು, ಈ ಪ್ರಶ್ನೆಗೆ ಉತ್ತರಿಸಲು ಅರ್ಹನಾಗಿರುವ, ಏಕೈಕ ಅಧಿಕಾರಿಯಾಗಿದ್ದು, ತನ್ನ ನಂಬಿಗಸ್ತ ಪ್ರವಾದಿಗಳ ಮೂಲಕ ಮಾತನಾಡಿದ್ದಾನೆ, ಹಾಗೂ ಆತನ ಮಾತುಗಳನ್ನು ಬರೆಯಲ್ಪಟ್ಟು ಸತ್ಯವೇದವೆಂಬ ಒಂದು ಪುಸ್ತಕದೊಳಗೆ ಸಂಕಲಿಸಲಾಗಿದೆ (ಮತ್ತಾಯ 24:36). ಇಲ್ಲಿ ನಾವು ಈ ಪ್ರಶ್ನೆಯನ್ನು ಸತ್ಯವೇದದ ಅನುಸಾರವಾಗಿ ಉತ್ತರಿಸಿ, ಪ್ರಸ್ತುತ ಲೋಕವು ಹೇಗೆ ಅಂತ್ಯಗೊಳ್ಳುವದೆಂದು ನೋಡೋಣ.

ದೇವರ ಸೃಷ್ಟಿಯ ಉದ್ದೇಶ

ಪರಲೋಕ ಮತ್ತು ಭೂಮಿಯು ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವ ಮೊದಲು ದೇವರು ಏಕೆ ಅದನ್ನು ಸೃಷ್ಟಿಸಿದನೆಂದು ನಾವು ಅರ್ಥಮಾಡಿಕೊಳ್ಳಬೇಕು. ಸೃಷ್ಟಿಯಲ್ಲಿ ದೇವರ ಉದ್ದೇಶವು, ಜೀವವಾಗಿ ಆತನಿಂದ ತುಂಬಲ್ಪಟ್ಟೂ ಆತನನ್ನು ಅಭಿವ್ಯಕ್ತಪಡಿಸಲು ಸಾಂಘಿಕ ಮನುಷ್ಯನಂತೆ ಇಡೀ ಭೂಮಿಯ ಮೇಲೆ ಆತನಿಗಾಗಿ ಅಧಿಕಾರಮಾಡುವಂತೆ ಕಟ್ಟಲ್ಪಟ್ಟೂ ಆತನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಒಂದು ಜನರ ಗುಂಪನ್ನು ಹೊಂದಿರುವುದಾಗಿದೆ (ಆದಿಕಾಂಡ 1:26). ಈ ಸಾಂಘಿಕ ಮನುಷ್ಯನು ಕಟ್ಟಲ್ಪಡದೆ ಈ ಲೋಕವು ಅಂತ್ಯಗೊಳ್ಳುವದಿಲ್ಲವೆಂದು, ಇದು ನಮಗೆ ಸೂಚಿಸುತ್ತದೆ (ಎಫೆಸದವರಿಗೆ 4:12). ದೇವರು ಇನ್ನೂ ಈ ಮೇರುಕೃತಿಯ (ನಿರ್ಮಾಣ) ಮೇಲೆ ಕೆಲಸಮಾಡುತ್ತಿದ್ದಾನೆ ಮತ್ತು ನೀವು ಅದರ ಒಂದು ಭಾಗವಾಗಲು ಸಾಧ್ಯ. (ಎಫೆಸದವರಿಗೆ 2:10).

ಭೂಮಿಯನ್ನು ಬಳಸಲಾಗುತ್ತಿದೆ

ಈ ವಿಶ್ವವು ನಂಬಲಾಗದಷ್ಟು ಪ್ರಾಚೀನವಾಗಿದೆ. ಪ್ರಸ್ತುತ ಅಂದಾಜಿನ ಪ್ರಕಾರ ಸುಮಾರು 13.8 ಶತಕೋಟಿ ವರ್ಷಗಳ ಹಿಂದೆ ವಿಶ್ವವನ್ನು ರಚಿಸಲಾಗಿದೆ. ದೇವರು ಮನುಷ್ಯನನ್ನು ಸೃಷ್ಟಿಸಿದ್ದಾಗಿನಿಂದ, ಮನುಷ್ಯನು ಭೂಮಿಯ ಸಂಪನ್ಮೂಲಗಳನ್ನು ಬಳಸುತ್ತಿದ್ದಾನೆ. ಕಳೆದ ಶತಮಾನದಲ್ಲಿ, ಈ ಸಂಪನ್ಮೂಲಗಳ ಮನುಷ್ಯನ ಬಳಕೆಯು ಅತಿಹೆಚ್ಚಾಗಿ, ಆ ಹಂತದಲ್ಲಿ ಅವು ವೇಗವಾಗಿ ಕ್ಷೀಣಿಸುತ್ತಿವೆ. ಬಳಕೆಯು ಈ ದರದಲ್ಲಿ ಮುಂದುವರೆದರೆ, ನಮ್ಮ ಕೈಗೆಟುಕುವ ತೈಲದ ನಿಕ್ಷೇಪಗಳು ಮುಂದಿನ ಶತಮಾನದವರೆಗೆ ಉಳಿಯುವುದಿಲ್ಲ. ಓಝೋನ್ ಪದರಿನಲ್ಲಿನ ಅಂತರದ ರಂಧ್ರಗಳು ಚರ್ಮದ ಕ್ಯಾನ್ಸರನ್ನು ಅತಿಯಾಗಿ ಹೆಚ್ಚಿಸಬಹುದು. ವಾತಾವರಣದಲ್ಲೂ ಹಸಿರುಮನೆ ಅನಿಲಗಳು ಹೆಚ್ಚುತ್ತಿವೆ, ಆದ್ದರಿಂದ ಭೂಮಂಡಲವು ಬೆಚ್ಚಗಾಗುತ್ತಿದೆ ಮತ್ತು ಹೆಚ್ಚಾದ ಬರ, ಬೆಂಕಿ ಹಾಗೂ ಪ್ರವಾಹದೊಂದಿಗೆ ಹವಾಮಾನದ ಮಾದರಿಗಳು ಬದಲಾಗುತ್ತಿವೆ. ಚಂಡಮಾರುತಗಳು ಮತ್ತು ತೂಫಾನಗಳಂತಹ ತೀವ್ರ ಹವಾಮಾನದ ಘಟಣೆಗಳು ಆಗ್ಗಾಗೆ ಹೆಚ್ಚು ಹಾಗೂ ತೀವ್ರವಾಗುತ್ತಿವೆ. ಕಾಡುಗಳು ಕಡಿಮೆಯಾಗಿ; ವನ್ಯಜೀವಿಗಳಿಗೆ ಕಡಿಮೆ ವಾಸಸ್ಥಾನ ಮತ್ತು ಆಮ್ಲಜನಕವನ್ನು ರಚಿಸಲು ಕಡಿಮೆ ಸಸ್ಯವರ್ಗ ಇರುತ್ತದೆ. ಸಮುದ್ರ ಮಟ್ಟವು ಏರುತ್ತಿದ್ದು, ನೂರಾರು ಮಿಲಿಯನ್ ಜನರಿಂದ ಭೂನಿವಾಸಿಸುವ ಕರಾವಳಿಯ ಭೂಮಿಯನ್ನು ಆವರಿಸುತ್ತಿದೆ. ಜಲಕುಹರದ ಮಟ್ಟವು ಕಡಿಮೆಯಾಗುತ್ತಿದ್ದು, ಹೆಚ್ಚು ಅಗತ್ಯವಿರುವ ಶುದ್ಧ ನೀರಿನ ಕೊರತೆಗೆ ಕಾರಣವಾಗುತ್ತಿದೆ. ರಾಸಾಯನಿಕ ಮತ್ತು ಪರಮಾಣು ತ್ಯಾಜ್ಯಗಳು ನಮ್ಮ ಶುದ್ಧನೀರಿನ ಸರಬರಾಜಿನೊಳಗೆಯೂ ಸಮುದ್ರದೊಳಗೆಯೂ ಹರಿಯುತ್ತಿವೆ. ಪ್ರತಿ ಕ್ಷಣಕ್ಕೆ ಗಾಳಿಯು ಕಲುಷಿತಗೊಳ್ಳುತ್ತಿದೆ, ಇದರಿಂದಾಗಿ ಅನೇಕ ನಗರ ಪ್ರದೇಶಗಳಲ್ಲಿ ತೀವ್ರವಾದ ಉಸಿರಾಟದ ತೊಂದರೆ ಉಂಟಾಗುತ್ತಿದೆ. ವಿಶ್ವದ ಜನಸಂಖ್ಯೆಯು ಘಾತೀಯವಾಗಿ ಸ್ಫೋಟಗೊಳ್ಳುತ್ತಿದೆ. ನಮ್ಮ ಅಥವಾ ನಮ್ಮ ಮಕ್ಕಳ ಜೀವಿತಾವಧಿಯ ಬೇಡಿಕೆಯಿಂದ ಉಳಿಯುವಿಕೆಗಾಗಿ ಬೇಕಾಗಿರುವ ಆಹಾರ ಹಾಗೂ ಇತರ ಅಗತ್ಯಗಳಿನ ಪೂರೈಕೆಯಲ್ಲಿ ಹೆಚ್ಚು ಕೊರತೆ ಉಂಟಾಗಬಹುದು. ಒಂದು ದೊಡ್ಡ ಪರಮಾಣು ಮುಖಾಮುಖಿ ಆಗದಿದ್ದರೂ ಭೂಮಿಯು 30 ರಿಂದ 50 ವರ್ಷಗಳಲ್ಲಿ ನಾವು ಇಂದು ವಾಸಿಸುವ ಗ್ರಹದಂತೆಯೇ ಇರುವುದಿಲ್ಲ. ಒಂದು ದಿನ ಭೂಮಿಯ ಉಪಯುಕ್ತತೆಯು ಮುಗಿದು, ಅದನ್ನು ಸುಡುವ ಹಳೆಯ ಉಡುಪಿನಂತೆ ಸುತ್ತಲಾಗುವುದು ಎಂದು ಸತ್ಯವೇದವು ಹೇಳುತ್ತದೆ (ಇಬ್ರಿಯರಿಗೆ 1:10-12), (2 ಪೇತ್ರ 3:12).

ಲೋಕದ ಅಂತ್ಯಕ್ಕೆ ನಡೆಸುವ ದಿನಗಳು

ಲೋಕವು ಯಾವಾಗ ಅಂತ್ಯವಾಗುವದೆಂದು ಸತ್ಯವೇದವು ಹೇಳುವುದಿಲ್ಲ. ಸಮಯ ಅಥವಾ ದಿನ ನಮಗೆ ಗೊತ್ತಿಲ್ಲ (ಮತ್ತಾ. 25:13), ಆದರೆ ಲೋಕದ ಅಂತ್ಯದೆಡೆಗೆ ನಡೆಸುವ ದಿನಗಳು ಹೇಗಿರುತ್ತವೆ ಎಂಬುದರ ಕುರಿತು ಅದು ನಮಗೆ ಹೇಳುತ್ತದೆ. ಕೊನೆಯ ದಿನಗಳಲ್ಲಿ, ಯುದ್ಧಗಳು, ಯುದ್ಧಗಳ ವದಂತಿಗಳು, ಕ್ಷಾಮಗಳು ಮತ್ತು ಭೂಕಂಪಗಳು ಉಂಟಾಗುತ್ತವೆ (ಮತ್ತಾ. 24:6-7). ಕೊನೆಯ ದಿನಗಳಲ್ಲಿ, ಅನೀತಿಯ ವಾತಾವರಣವು ಹೆಚ್ಚಾಗುತ್ತದೆ (ಮತ್ತಾ. 24:12). ದೇವರ ಮತ್ತು ಇತರರಿಗಾಗಿ ಅನೇಕ ಜನರ ಪ್ರೀತಿಯು ತಣ್ಣಗಾಗುವುದು (ಮತ್ತಾ. 24:12). ಜೀವನವು ಅನೇಕ ಆಂತಕಗಳಿಂದ ತುಂಬಿಕೊಳ್ಳುವುದು ಮತ್ತು ಈ ಕಾರಣದಿಂದಾಗಿ, ಆತಂಕಗಳಿಂದ ಪಾರಾಗಲು ಜನರು ಎಲ್ಲಾ ರೀತಿಯ ಪಟಿಂಗತನದಲ್ಲಿ ಮತ್ತು ಕುಡಿತದಲ್ಲಿ ಹೆಚ್ಚಾಗಿ ಭಾಗವಹಿಸುವರು (ಲೂಕ 21:34). ಸತ್ಯವೇದವು ಲೋಕದ ಅಂತ್ಯದವರೆಗೆ, ನಾಲ್ಕು ಕುದುರೆಗಳ ಓಟದ ಉದಾಹರಣೆಯನ್ನು ಕೂಡಾ ಕೊಡುತ್ತದೆ (ಪ್ರಕ. 6:1-8). ನಾಲ್ಕು ಕುದುರೆಗಳು ಸುವಾರ್ತೆ, ಯುದ್ಧ, ಕ್ಷಾಮ, ಮತ್ತು ಮರಣವಾಗಿವೆ. ಈ ಓಟವು ಮುಂದುವರೆಯುವುದು ಮತ್ತು ತೀವ್ರವಾಗುವುದು. ಇವುಗಳಲ್ಲಿ ಯಾವುದು ದೂರವಾಗುವುದಿಲ್ಲ, ಮತ್ತು ವಿಷಯಗಳನ್ನು ಸುಧಾರಿಸುತ್ತವೆ ಎಂದು ನಾವು ಭಾವಿಸಿದಂತೆ ಅವು ಸುಧಾರಿಸುವುದಿಲ್ಲ ಆದರೆ ಹದಗೆಡುತ್ತವೆ.

ಲೋಕವು ಅಂತ್ಯವಾಗುವ ರೀತಿ

ಹೇಗಿದ್ದರೂ, ಲೋಕವು ಹೇಗೆ ಅಂತ್ಯವಾಗುವದೆಂದು ಸತ್ಯವೇದವು ನಮಗೆ ಹೇಳುತ್ತದೆ. ಮುಖ್ಯಾಂಶಗಳು ಇಲ್ಲಿವೆ. ಲೋಕದ ಅಂತ್ಯದ ಮೊದಲು ಅಂತಿಮ ಏಳು ವರ್ಷಗಳನ್ನು ಮೂರುವರೆ ವರ್ಷಗಳ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಮೂರುವರೆ ವರ್ಷಗಳು ಶಾಂತಿಯುತವಾಗಿರುವವು. ಆ ಅವಧಿಯ ಅಂತ್ಯದಲ್ಲಿ, ದೇವರು ತನ್ನನ್ನೇ ಜೀವವಾಗಿ ತುಂಬಿಕೊಂಡಿರುವ ಸಾಂಘಿಕ ಮನುಷ್ಯನ ಉತ್ಪಾದಿಸುವ ತನ್ನ ಕೆಲಸವನ್ನು ಮುಗಿಸಿರುವನು (ಪ್ರಕಟಣೆ 12:5). ಈ ಜನರು ಜಯಶಾಲಿಗಳಾಗಿದ್ದಾರೆ. ಬಳಿಕ ಆತನು ಅವರನ್ನು ಪರಲೋಕದಲ್ಲಿ ಮೇಲೆ ತೆಗೆದುಕೊಳ್ಳುವನು. ಅಲ್ಲಿ ಅವರು ದೆವ್ವನಾಗಿರುವ, ಸೈತಾನನನ್ನು ಸೋಲಿಸಿ, ಅವನನ್ನು ಭೂಮಿಮೇಲೆ ಎಸೆಯುವರು (ಪ್ರಕಟಣೆ 12:9-11), (ಪ್ರಕಟಣೆ 14:1). ಆಗ ಅಶುದ್ದಾತ್ಮವು ಕ್ರಿಸ್ತವಿರೋಧಿ ಎಂದು ಕರೆಯಲ್ಪಟ್ಟ ದುಷ್ಟ ಮನುಷ್ಯನೊಳಗೆ ಪ್ರವೇಶಿಸಿ ಸೈತಾನನು ಅವನಿಗೆ ತನ್ನ ಶಕ್ತಿಯನ್ನು ಕೊಡುವನು (ಪ್ರಕಟಣೆ 13:2). ಲೋಕದ ಕಡೆಯ ಮೂರುವರೆ ವರ್ಷದ ಪ್ರಾರಂಭವು ಇದಾಗಿದೆ. ಸತ್ಯವೇದವು ಈ ಅವಧಿಯನ್ನು ಮಹಾ ಸಂಕಟಕಾಳವೆಂದು ಕರೆಯುತ್ತದೆ (ಮತ್ತಾಯ 24:11). ಆ ಸಮಯದಲ್ಲಿ ಭೂಮಿಯು ಯಾರೂ ವಾಸಿಸಲು ಬಯಸದಂಥ ಸ್ಥಳವಾಗಿರುವುದು (ಪ್ರಕಟಣೆ 3:10). ಕ್ರಿಸ್ತವಿರೋಧಿಯು ಮಾನವೀಯತೆಗೆ ಬಹಳ ಹಾನಿಯುಂಟುಮಾಡುವನು, ಮತ್ತು, ಅದೇ ಸಮಯಕ್ಕೆ, ಅನೇಕ ಪ್ರಾಕೃತಿಕ ಮತ್ತು ಅಲೌಕಿಕ ವಿಪತ್ತುಗಳು ಸಂಭವಿಸುತ್ತವೆ (ಪ್ರಕಟಣೆ 11:13). ಮೂರುವರೆ ವರ್ಷಗಳ ಕೊನೆಯಲ್ಲಿ, ಕ್ರಿಸ್ತನು ಮತ್ತು ಆತನ ಜಯಶಾಲಿಗಳು, ಹರ್ಮಗೆದೋನ್ ಎಂದು ಕರೆಯಲ್ಪಟ್ಟ ಸ್ಥಳದಲ್ಲಿ ಕ್ರಿಸ್ತವಿರೋಧಿಯನ್ನೂ ಅವನ ಸೈನ್ಯವನ್ನೂ ಜಜ್ಜಲು ಪರಲೋಕದಿಂದ ಕೆಳಗೆ ಬರುವರು (ಪ್ರಕಟಣೆ 16:16), (ಪ್ರಕಟಣೆ 19:13-16), (ಪ್ರಕಟಣೆ 17:14). ಆಗ ದೇವರ ರಾಜ್ಯವು ಭೂಮಿಯ ಮೇಲೆ ತರಲ್ಪಡುವುದು, ಮತ್ತು ಸೈತಾನನು ಸಾವಿರ ವರ್ಷಗಳಿಗೆ ಹಿಡಿದಿಡಲ್ಪಡುವನು (ಪ್ರಕಟಣೆ 20:2). ಸಾವಿರ ವರ್ಷಗಳ ಕೊನೆಯಲ್ಲಿ, ಸೈತಾನನು ಸ್ವಲ್ಪ ಕಾಲದವರೆಗೆ ಬಿಡುಗಡೆಮಾಡಲ್ಪಡುವನು. ಆಗ ಅವನು ಹೆಚ್ಚು ಹಾನಿಯನ್ನುಂಟುಮಾಡುವನು, ಆದರೆ ಆಗ ಅವನು ಬೆಂಕಿಯ ಕೆರೆಯೊಳಗೆ ಎಸೆಯಲ್ಪಡುವನು (ಪ್ರಕಟಣೆ 19:20), (ಪ್ರಕಟಣೆ 20:10). ಸೈತಾನನನ್ನೂ ಅವನ ಎಲ್ಲಾ ಸಹಯೋಗಿಗಳನ್ನೂ ಅಲ್ಲಿ ಶಾಶ್ವತವಾಗಿ ತೀರ್ಪಿಸಲಾಗುವುದು. ಆದರೆ ದೇವರ ಕಡೆಗೆ ತಿರುಗುವ ಮತ್ತು ದೇವರಿಂದ ತುಂಬಿಕೊಳ್ಳಲು ತೆರೆಯಲ್ಪಡುವ ಜನರು ದೇವರಲ್ಲಿ ಮತ್ತು ದೇವರೊಂದಿಗೆ ನವೀಕರಿಸಲ್ಪಟ್ಟ ಭೂಮಿಯ ಮೇಲೆ ನಿತ್ಯತ್ವಕ್ಕಾಗಿ ಜೀವಿಸುವರು (ಪ್ರಕಟಣೆ 11:15). ಅಲ್ಲಿ ಸಂತೋಷವೂ ಶಾಂತಿಯೂ ನೀತಿಯೂ ಇರುವುದು (ಪ್ರಕಟಣೆ 22:3, 5). ಅಲ್ಲಿ ಇನ್ನೂ ಯಾವುದೇ ಕಣ್ಣೀರು, ಕೊರತೆ, ಕಾಯಿಲೆ, ಕಳ್ಳತನ, ಅನ್ಯಾಯ ಅಥವಾ ಸಾವು ಇರುವುದಿಲ್ಲ (ಪ್ರಕಟಣೆ 21:3-4).

ಮಹಾ ಸಂಕಟಕಾಳದ ಸಮಯದಲ್ಲಿ ಲೋಕದ ಅಂತ್ಯದಲ್ಲಿ ಬರುವ ವಿನಾಶದಿಂದ ಪಾರಾಗಲು ನೀವು ಬಯಸಿದರೆ, ಇಂದು ದೇವರೆಡೆಗೆ ಪಶ್ಚಾತ್ತಾಪಪಟ್ಟು ಆತನನ್ನೂ ಆತನ ರಕ್ಷಣೆಯನ್ನೂ ನೀವು ಸ್ವೀಕರಿಸಬೇಕು (ಮತ್ತಾಯ 4:17), (ಎಫೆಸದವರಿಗೆ 5:18-19), (ಯೋಹಾನ 10:10). ನೀವು ಸೈತಾನನ ಮತ್ತು ದೇವರ ತೀರ್ಪಿನಿಂದ ತಪ್ಪಿಸಿಕೊಳ್ಳಲು ಬಯಸಿದರೆ, ಈ ಕೆಳಗಿನಂತೆ ಪ್ರಾರ್ಥಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ:

“ಓ ಕರ್ತನಾದ ಯೇಸುವೇ! ಸೈತಾನನ ರಾಜ್ಯದಿಂದ ದೇವರ ರಾಜ್ಯದಲ್ಲಿ ನನ್ನನ್ನು ಸ್ಥಳಾಂತರಿಸು. ನಾನು ನಿನ್ನಲ್ಲಿ ಮತ್ತು ನಿನ್ನೊಂದಿಗೆ ನಿತ್ಯತ್ವಕ್ಕೂ ಜೀವಿಸಲು ಬಯಸುತ್ತೇನೆ. ನನ್ನ ಜೀವವಾಗಿರಲು ನನ್ನೊಳಗೆ ಬಾ. ನಿನ್ನ ರಕ್ಷಣೆಯೊಳಗೆ ನಾನು ಪ್ರವೇಶಿಸುವಂತೆ, ಈಗ ನೀನು ನನಗೆ ಬೇಕು.”

ದೇವರ ಕುರಿತು ಮತ್ತು ಮಾನವಕುಲದ ಕುರಿತು ಆತನ ಯೋಜನೆಯನ್ನು ಇನ್ನಷ್ಟು ಓದಲು, ದಯವಿಟ್ಟು ನಮ್ಮ ಜಾಲತಾಣಕ್ಕೆ ಭೇಟಿನೀಡಿ: https://www.rhemabooks.org/kn/articles/questions-about-god-man-and-what-is-happening-on-the-earth/

 


ಇತರರೊಂದಿಗೆ ಹಂಚಿಕೊಳ್ಳಿ